ಕನ್ನಡ ಮಡಿಲಿಗೆ ಬೂಕರ್ ಪ್ರಶಸ್ತಿ…

ಬಾನು ಮುಷ್ಕಾಕ್ ಅವರು ಲೇಖಕಿಯಷ್ಟೇ ಅಲ್ಲ, ಪತ್ರಕರ್ತೆ, ವಕೀಲೆ ಮತ್ತು ರೈತ, ದಲಿತ, ಪ್ರಗತಿಪರ ಹೋರಾಟಗಾರ್ತಿ ಕೂಡ. ಲಂಕೇಶ್ ಪತ್ರಿಕೆಯಲ್ಲಿ ವರದಿಗಾರ್ತಿಯಾಗಿ ಬರವಣಿಗೆ ಆರಂಭಿಸಿದರು ಅವರು. ಶಿವಮೊಗ್ಗ, ಹಾಸನ, ಮೈಸೂರು ಭಾಗದಲ್ಲಿ ಲಂಕೇಶ್ ಪತ್ರಿಕೆಗೆ ಬರೆಯುತ್ತ ಲಂಕೇಶ್ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಈ ಒಡನಾಟವೇ ಅವರಲ್ಲಿ ಸಾಮಾಜಿಕ ಹಿನ್ನೆಲೆಯೊಂದನ್ನು ರೂಪುಗೊಳಿಸಿತು. ನಂತರದ ದಿನಗಳಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಬರೆಯುವುದು ಕಡಿಮೆಯಾದ ಬಳಿಕ ವಕೀಲ ವೃತ್ತಿ ಆರಂಭಿಸಿದರು. ಜತೆ ಜತೆಯಲ್ಲೇ ಚಂದ್ರಪ್ರಸಾದ್ ಅವರೊಂದಿಗೆ ದಲಿತ ಮೂರ್ತಿ, ಮಂಜುನಾಥದತ್ತ ಅವರೊಂದಿಗೆ ಸೇರಿ ರೈತ ಹೋರಾಟದಲ್ಲಿ ತೊಡಗಿಸಿಕೊಂಡರು. ಇದರ ನಡುವೆ ಒಮ್ಮೆ ಕಾಂಗ್ರೆಸ್ ಪಕ್ಷದಿಂದ ನಗರಸಭೆ ಸದಸ್ಯೆಯೂ ಆಗಿ ಜನರ ಧ್ವನಿಯಾಗಿದ್ದರು. ರಾಜಕೀಯ ಅವರ ಮನಃಸ್ಥಿತಿಗೆ ಒಗ್ಗದ ಕಾರಣ ವಕೀಲ ವೃತ್ತಿಯೊಂದಿಗೆ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಂಡರು. ಸಾಮಾಜಿಕ ಹೋರಾಟಗಳಲ್ಲಿ ಗುರುತಿಸಿಕೊಂಡರು. ಹೋರಾಟ, ವೆಂಕಟೇಶ ಕೇಳು ಈಗಾಗಲೇ ಬಾನು ನ ಡಿ ವಿಜೇತಚಿಕ್ಕಮಗಳೂರಿನ ಸೌಹಾರ್ದದ ತಾಣ ಬಾಬಾಬುಡನ್‌ಗಿರಿಯನ್ನು ಸಂಘಪರಿವಾರದ ಗುಂಪು ಕೋಮು ರಾಜಕೀಯದ ಪ್ರಯೋಗಶಾಲೆ ಮಾಡಲು ಹೊರಟಾಗ ಅದರ ವಿರುದ್ಧ ರೂಪುಗೊಂಡ ಚಳವಳಿಯಲ್ಲಿ ಸಕ್ರಿಯರಾಗಿದ್ದರು. 2003ರಲ್ಲಿ ಗಿರೀಶ ಕಾರ್ನಾಡ, ಯು.ಆರ್. ಅನಂತಮೂರ್ತಿ, ಕೆ.ಮರುಳಸಿದ್ದಪ್ಪ, ಗೌರಿ ಲಂಕೇಶ್, ಶೂದ್ರ ಶ್ರೀನಿವಾಸ್ ಇತ್ಯಾದಿ ಪ್ರಮುಖರ ಜತೆಗೆ ಬಾಬಾಬುಡನ್ ಗಿರಿ ಸತ್ಯಶೋಧನಾ ಸಮಿತಿ ಭಾಗವಾಗಿ, ವರದಿ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದೇ ಸಂದರ್ಭದಲ್ಲಿ ಬಾಬಾಬುಡನ್‌ಗಿರಿ ಉಳಿಸಿ ಹೋರಾಟ
ತೀವ್ರಗೊಳ್ಳುತ್ತಿತ್ತು. ಅದರಲ್ಲಿ ಬಾನು ಅವರದ್ದು