Monday, Jul 07, 2025

ನಮ್ಮ ರಾಜಧಾನಿ

Breaking News

Doha Diamond League 2025: 90.23 ಮೀ. ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ, ಹೊಸ ದಾಖಲೆ

ಶುಕ್ರವಾರ ರಾತ್ರಿ ಇಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ನೀರಜ್, ತಮ್ಮ 3ನೇ ಯತ್ನದಲ್ಲಿ 90.23 ಮೀ. ದೂರಕ್ಕೆ ಜಾವೆಲಿನ್ ಎಸೆದು, ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.

ದೋಹಾ: 2 ಬಾರಿ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರು ಹೊಸ ದಾಖಲೆಯೊಂದನ್ನು ಬರೆದಿದ್ದು, ತಮ್ಮ ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ 90 ಮೀ. ದೂರ ದಾಟಿದ್ದಾರೆ.

ಶುಕ್ರವಾರ ರಾತ್ರಿ ಇಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ನೀರಜ್, ತಮ್ಮ 3ನೇ ಯತ್ನದಲ್ಲಿ 90.23 ಮೀ. ದೂರಕ್ಕೆ ಜಾವೆಲಿನ್ ಎಸೆದು, ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.

ನೀರಜ್ ಬಹಳ ಸಮಯದಿಂದ 90 ಮೀಟರ್ ಎಸೆಯಲು ಪ್ರಯತ್ನಿಸುತ್ತಿದ್ದರು. ಆದರೆ, ಯಶ ಕಂಡಿರಲಿಲ್ಲ. ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ ಅವರ ಈ ಕನಸು ನನಸಾಗಿದೆ. ಇದು ನೀರಜ್ ಅವರ ವೃತ್ತಿಜೀವನದ ಅತ್ಯುತ್ತಮ ಸಾಧನೆಯಾಗಿದೆ.

ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಜರ್ಮನಿಯ ಜೂಲಿಯನ್ ವೆಬರ್ ಪ್ರಥಮ ಸ್ಥಾನ ಪಡೆದರು. ಐದನೇ ಪ್ರಯತ್ನದಲ್ಲಿ ಅವರು 91.06 ಮೀ ಎಸೆತವನ್ನು ಎಸೆದರು. ನೀರಜ್‌ ಈ ಟೂರ್ನಿಯಲ್ಲಿ ಅಮೋಘ ಆರಂಭವನ್ನು ಪಡೆದರು. ಅಲ್ಲದೆ, ತಮ್ಮ ಮೊದಲ ಪ್ರಯತ್ನದಲ್ಲೇ 88.44 ಮೀಟರ್ ದೂರ ಎಸೆದು ಮಿಂಚಿದರು.

ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕ ಗೆದ್ದಿರುವ ನೀರಜ್‌ ಚೋಪ್ರಾ ಅವರು ಜಾವೆಲಿನ್‌ ಎಸೆತದಲ್ಲಿ 90 ಮೀಟರ್‌ಗೂ ದೂರ ಎಸೆಯುವ ಆಸೆಯನ್ನು ಹೊಂದಿದ್ದರು. ಆದರೆ ಇದರು ಸಾಕಾರವಾಗಿರಲಿಲ್ಲ. ಶುಕ್ರವಾರ ಈ ಆಸೆ ಕೈ ಗೂಡುತ್ತಿದ್ದಂತೆ ಈ ಸಾಧನೆ ಮಾಡಿದ ಏಷ್ಯಾದ ಮೂರನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.

Leave a Reply

Your email address will not be published. Required fields are marked *